ಆಕ್‍ಲೆಂಡ್ 
ನ್ಯೂಜಿಲೆಂಡಿನ ಅತಿ ದೊಡ್ಡ ನಗರ. ಉತ್ತರ ದ್ವೀಪದ ಪೂರ್ವ ಕರಾವಳಿಯಲ್ಲಿರುವ ರೇವು ಪಟ್ಟಣ. ಆಧುನಿಕ ಅನುಕೂಲತೆಗಳಿಂದ ಕೂಡಿದ್ದು ನೌಕಾ ಚಟುವಟಿಕೆಗಳ ಮೂಲ ಕ್ಷೇತ್ರವಾಗಿದೆ. ಉತ್ತರ ದಕ್ಷಿಣ ಭಾಗಗಳಲ್ಲಿ ಹುಲ್ಲುಗಾವಲುಗಳಿರುವುದರಿಂದ ಹೈನು ಕೈಗಾರಿಕಾ ಕೇಂದ್ರವೂ ಆಗಿದೆ. ಚರ್ಮ ಮತ್ತು ತೊಲೆಗಳು ರಫ್ತಾಗುತ್ತವೆ. 1865ರಲ್ಲಿ ವೆಲ್ಲಿಂಗ್‍ಟನ್ ನ್ಯೂಜಿóಲೆಂಡಿನ ರಾಜಧಾನಿಯಾಗುವವರೆಗೆ ಇದೇ ದೇಶದ ರಾಜಧಾನಿಯಾಗಿತ್ತು. ವೆಲ್ಲಿಂಗ್‍ಟನ್ ಮತ್ತು ಉತ್ತರ ದ್ವೀಪದ ಇತರ ಕೇಂದ್ರಗಳೊಡನೆ ರೈಲು ಮತ್ತು ವಿಮಾನ ಸಂಪರ್ಕಗಳೂ ಆಸ್ಟ್ರೇಲಿಯ ಬ್ರಿಟನ್ ಮತ್ತು ಉತ್ತರ ಅಮೆರಿಕಗಳ ಫೆಸಿಪಿಕ್ ತೀರದೊಡನೆ ಹಡಗು ಹಾಗೂ ವಿಮಾನಗಳೂ ಇವೆ. ಒಂದು ವಿಶ್ವವಿದ್ಯಾನಿಲಯವೂ ಮಾವೊರಿ ಕಲೆಯ ವಸ್ತುಸಂಗ್ರಹಾಲಯವೂ ಇವೆ.
	   
  (ಎಂ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ